Thursday, May 31, 2012

ಸುಡುಗಾಡು  


ಈ ಹಾಳು ಸುಡುಗಾಡಿನ 
ತುಂಬಾ ಕಾಡುಕಗ್ಗತ್ತಲು, 
ಸೂರ್ಯನಿಗೂ ಜಾಗವಿಲ್ಲ,
ಚಂದ್ರನಿಗೂ ನೆಲೆಯಿಲ್ಲ,
ನಕ್ಷತ್ರಗಳ ಕೂಗು ಕೇಳುವವರಿಲ್ಲ!

ಅಲ್ಲಿ ಕಾಣುತಿದೆ ದೂರದಲಿ 
ಹೆಣ ಸುಡುವ ಬೆಂಕಿ,
ಕಿವಿಗೆ ಸುಡುವ ಮೂಳೆಗಳ
ಚಟಪಟ ಸದ್ದು , ಮೂಗಿಗೆ 
ಅಡರುವ ಕಮಟು ವಾಸನೆ!

ಅಲ್ಲೊಂದು, ಇಲ್ಲೊಂದು ಎದ್ದು 
ಓಡಾಡುವ ಜೀವಂತ ಶವಗಳು,
ಬಾಳೆ ಇಲ್ಲದೆ, ಕನಸೇ ಇಲ್ಲದೆ
ಕತ್ತಲ ಹಿಡಿಯ ಹೊರಟ 
ಪ್ರೀತಿಯ ಪ್ರತಿ ರೂಪಗಳು !

ಕುಳಿತ್ತಲಿಯೇ ಬಂದು ಹೆದರಿಸುವ 
ಚೀತ್ಕರಿಸಿ, ಬಿಕ್ಕಳಿಸಿ, ಗಹಗಹಿಸಿ
ನಗುವ, ಸತ್ತ ಸಂಭಂದಗಳು!
ಎದ್ದು ನಿಂತರೆ ಸಾಕು,
ಬೆನ್ನೆರುವ ನೆನಪಿನ ಬೇತಾಳಗಳು!!

ಓಡಿ ಹೋಗಲಾ ನಾನು, ಕತ್ತಲ 
ಕೋಟೆಯಲಿ, ಕಾಲಿಗೆ ತೊಡರುವ 
ಮೂಳೆಗಳ ರಾಶಿ ತುಳಿದು, ನನ್ನ 
ಹಳೆಯ ಸಮಾಧಿಗೆ ಮಣ್ಣು 
ಮುಚ್ಚಿ, ಮರಣ ಶಾಸನವ ಬರೆದು 
ಓಡಿ ಹೋಗಲಾ...?

2 comments:

  1. ಫಣಿ ಆಲೂರ್;ಚೆಂದದ ಕವನ.ಇಷ್ಟವಾಯಿತು.ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.

    ReplyDelete
  2. ತುಂಬಾ ಚೆಂದದ ಕವಿತೆ ಗೆಳೆಯಾ... ಇದಕ್ಕಿಂತ ಚೆನ್ನಾಗಿ ನನಗೆ ಅನ್ನಿಸೋ ಕವಿತೆಗೆ ಕಾಯುತಿದ್ದೇನೆ

    ReplyDelete

"ಬಿಗ್ ಟೆಂಪಲ್ "

"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...