Friday, March 18, 2011

ಅಗೋ ನೋಡಿ ಓಡುತ್ತಿದೆ


ಅಗೋ ನೋಡಿ ಓಡುತ್ತಿದೆ
ಹುಚ್ಚು ಕುದುರೆ ಬೆನ್ನ ಹೇರಿ
ಕಂಡದೆಲ್ಲ ನುಂಗಿ ಹಾಕಿ
ಮುನುಕುಲಕೆ ಬಲೆಯ ಬೀಸಿ
ಅಗೋ ನೋಡಿ........!

ಅಗೋ ನೋಡಿ ಓಡುತ್ತಿದೆ
ಬದುಕುಗಳನ್ನು ಅಸ್ತಗೊಳಿಸಿ
ಬಂಧಗಳ ತುಳಿದುಹಾಕಿ
ಕನಸುಗಳಿಗೆ ಬೆಂಕಿ ಇಟ್ಟು
ಅಗೋ ನೋಡಿ......!

ಅಗೋ ನೋಡಿ ಓಡುತ್ತಿದೆ
ಅಟ್ಟಹಾಸದ ಕೂಗು ಹಾಕಿ
ಕಣ್ಣಿರಿನ ಹೊಳೆಯ ಹರಿಸಿ
ಆತ್ಮ ಶಕ್ತಿಯ ಸದೆಬಡಿದು
ಅಗೋ ನೋಡಿ.........!

ಅಗೋ ನೋಡಿ ಓಡುತ್ತಿದೆ
ಎದೆಯ ಕದವ ಸ್ವಲ್ಪ ಸರಿಸಿ
ಕಣ್ಣು ಮಿಟುಕಿ ,ಪಿಸುಗುಟ್ಟಿ
ಮತ್ತೆ
ಬರುವೆ ನಾನು ಎಂದು
ಕೇಕೆಹಾಕಿ ಓಡುತ್ತಿದೆ...!

2 comments:

  1. ಈ ಕವಿತೆ ಓದುವಾಗ , ಕಂಬಾರ " ಕಾಡು ಕುದುರೆ ಓಡಿ ಬಂದಿತ್ತಾ...." ನೆನಪಿಗೆ ಬಂತು. ನನಗೆ ನೀವು ತುಂಬಾ ಸಾಹಿತ್ಯದ ಅಧ್ಯಾಯನದಲ್ಲಿ ತೊಡಗಿದ್ದೀರಿ ಅನ್ನಿಸಿತು. ತುಂಬಾ ಚೆನ್ನಾಗಿದೆ. ಕವಿತೆ. ನೀವು ಒಂದು ಬ್ಲಾಗಿನ ಮಾಲೀಕರಾಗಿದ್ದು ಇನ್ನೂ ಹೆಚ್ಚಿನ ಸಂತಸ ತಂದಿದೆ.

    ReplyDelete
  2. ಕವನವನ್ನು ಸಲೀಸಾಗಿ ಮನಸ್ಸಲ್ಲಿ ಒಡ ಮೂಡಿಸುವ ಕಲೆ ನಿಮದಾಗಿದೆ. ಮುಂದುವರೆಸಿ.

    ನನ್ನ ಬ್ಲಾಗಿಗೂ ಸ್ವಾಗತ...

    ReplyDelete

"ಬಿಗ್ ಟೆಂಪಲ್ "

"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...