Tuesday, March 8, 2011

ಕಳೆದ ಕನಸುಗಳು

ದಾರಿಯಲ್ಲಿ ಅವನನ್ನು ನೋಡಿದಾಗ ಬಾಲ್ಯದ ನೆನಪೆಲ್ಲ ಒಟ್ಟಾಗಿ ಓಡಿಬಂದು ಕಣ್ಣಮುಂದೆ ನಿಂತವು, ಮನಸ್ಸು ಗೂಗಲ್ ಗಿಂತ ಫಾಸ್ಟ್ಅಲ್ವಾ.? ನೆನಪುಗಳ ಬುಟ್ಟಿಯಲ್ಲಿ ಚಂದವೆನಿಸುವ ಅನುಭವಗಳು ಬೆಚ್ಚಗೆ ಕುಳಿತು ನನಗೆ ಅಣಕಿಸುತ್ತಿದ್ದವು. ದಿನಗಳ ನಮ್ಮ ಲೋಕವೇ ಚಿರಂತನ, ನಾಳೆಯ ಚಿಂತೆಯಿಲ್ಲದೆ, ಸಂಭಂದಗಳ ಗೊಡವೆ ಇಲ್ಲದೆ, ಬಣ್ಣ ಬಣ್ಣದ ಕನಸುಗಳನು ಕಟ್ಟುವ ಕ್ಷಣಗಳು.

ನಾನು ದೊಡ್ಡವನಾದಾಗ engineer ಆಗ್ತೀನಿ, doctor ಆಗ್ತೀನಿ, police, teacher, lawyer ಆಗ್ತೀನಿ ಎಂದು ಕ್ಲಾಸಲ್ಲಿ ಟೀಚರ್ ಕೇಳಿದಾಗ ಹೇಳಿದ ನೆನಪು! ಆಗ ನಾವು ಹೇಳಿದ್ದು ನಮ್ಮ ಕನಸಾ..? ಯಾಕೋ doubt. ನನಗನ್ಸುತ್ತೆ ನನ್ನ ಅಣ್ಣ ಇಂಜಿನಿಯರ್ ಆಗಿದ್ದ ಕಾರಣವೋ ಏನೋ ನಾನು ಹಾಗೆ ಆಗಬೇಕು ಅಂದುಕೊಂಡಿದ್ದೆ, ನಾನು lightagi ದಾರಿ ತಪ್ಪಿದ್ದು ಇಲ್ಲೇ ಅನ್ಸುತ್ತೆ. ಕಾಲದಲ್ಲಿ we are under some influence ಅಲ್ವಾ...? influence ಸುಳಿಯಲ್ಲಿ ನಮ್ಮ ಎಷ್ಟೋ ಕನಸುಗಳು ಕಳೆದು ಹೋಗಿರೋದು ಗೊತ್ತಾಗಲೇ ಇಲ್ಲ.

ರೀತಿ ಕನಸು ಕಳೆದಿವೆ ಎಂದು ಗೊತ್ತಾಗಿದ್ದೆ ನಾನು so called BE ಮುಗಿಸಿದ ಮೇಲೆ. I am engineer ಎನ್ನುವ ಉದ್ಗಾರದ ಹಿಂದೆ ಕಳೆದ ಕನಸುಗಳ ಸಾಲು ಮೆರವಣಿಗೆ ಹೊರಟಿತ್ತು, ಗುರುತು ಸಿಗದಿದ್ದ ಹಾಗೆ ಬದಲಾಗಿದ್ದವು , ಬದಲಾಗಿದ್ದು ನಾವ..? ಆ ಕಳೆದ ಕನಸುಗಳ ಅರ್ಥ ಸ್ಕೂಲ್ ಬ್ಯಾಗ್ ಹೊತ್ತು ನಡೆಯುತಿದ್ದ ಹುಡುಗನ ನೋಡಿ ತಿಳಿಯಿತು..

No comments:

Post a Comment

"ಬಿಗ್ ಟೆಂಪಲ್ "

"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...