ಗೀಚಿದ ಗೆರೆಯ ಅರ್ಥ
ಹುಡುಕುತ್ತ ಕುಳಿತೆ.!
ಸಿಕ್ಕಿತೇನೋ..? ಆದರೆ
ಅರ್ಥಕಿಂತ ಗೆರೆಯೇ
ಸುಂದರವಾಗಿದೆ.
*******************
ನಾ ನೋಡಿದ ಕಡೆಯಲೆಲ್ಲ
ಬರಿ ನಿನ್ನ ನೆರಳೆ ತುಂಬಿದೆ..!
ಆ ನೆರೆಳಿನ ಸೆರೆಮನೆಯಿಂದ
ಹೊರಬರುವ ದಾರಿ ತಿಳಿಯದಾಗಿದೆ..?
***************************
ಹುಡುಕಿದರೆ ಸಿಗಭಾಹುದೇನೋ
ಆ ಸಂತೆಯಲಿ ಕಳೆದ ನಾಣ್ಯ,
ಆದರೆ ನನಗೆ, ಹುಡುಕುವ ಆಟಕಿಂತ
ಕಳೆಯುವ ಆಟವೇ ಚಂದ ..!
**************************
ಕನಸು ಕಳೆದು ಹೋಗಿದೆ..?
ಬಹುದಿನಗಳಿಂದ ಕೂಡಿಟ್ಟ, ಬಚ್ಚಿಟ್ಟ
ಅಮಾಯಕ ಕನಸು ಕಾಣದಾಗಿದೆ..!
ಸಿಕ್ಕಿದರೆ ಅದನ್ನು ನೆನಪಿನ
ಸೆರೆಮನೆಗೆ ದೂಡುವ ಶಿಕ್ಷೆ ಕಾದಿದೆ!.
**************************
ಪದಗಳ ಪುಟಗಳ ನಡುವೆ
ಮರೆತ ಪದಗಳ ಕದನ,
ಮಾತಿರದ ಅರ್ಥಗಳ ನಡುವೆ
ಕಳೆದ ಕ್ಷಣಗಳ ಮನನ..!
**********************
ಹಾರಿ ಹೋಯಿತು ಕಾಗದ,
ಪುಸ್ತಕದ ಭಂದವನು ಬಿಡಿಸಿ,
ಪದಗಳ ಹೊರೆಯನು ಇಳಿಸಿ,
ಗಾಳಿಯ ಸಂಗವ ಬಯಸಿ,
ಬರೆದವನ ತಪ್ಪನು ಕ್ಷಮಿಸಿ,
ಹಾರಿ ಹೋಯಿತು ಕಾಗದ...!
***********************
Subscribe to:
Posts (Atom)
"ಬಿಗ್ ಟೆಂಪಲ್ "
"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...

-
ಸುಡುಗಾಡು ಈ ಹಾಳು ಸುಡುಗಾಡಿನ ತುಂಬಾ ಕಾಡುಕಗ್ಗತ್ತಲು, ಸೂರ್ಯನಿಗೂ ಜಾಗವಿಲ್ಲ, ಚಂದ್ರನಿಗೂ ನೆಲೆಯಿಲ್ಲ, ನಕ್ಷತ್ರಗಳ ಕೂಗು ಕೇಳುವವರಿಲ್ಲ! ...
-
ಅಗೋ ನೋಡಿ ಓಡುತ್ತಿದೆ ಹುಚ್ಚು ಕುದುರೆ ಬೆನ್ನ ಹೇರಿ ಕಂಡದೆಲ್ಲ ನುಂಗಿ ಹಾಕಿ ಮುನುಕುಲಕೆ ಬಲೆಯ ಬೀಸಿ ಅಗೋ ನೋಡಿ........! ಅಗೋ ನೋಡಿ ಓಡುತ್ತಿದೆ ಬದುಕುಗಳನ್ನು ಅಸ್ತಗೊಳ...
-
ಬಾಲ್ಯವೆಂದರೆ ಹಾಗೆ ! ಸುರಿವ ಮಳೆಗೆ ಮೈಯೊಡ್ಡಿ ನಿಂತಿರುವ ಕನಸುಗಳನ್ನು ಬಾಚಿ ತಬ್ಬಿದಂತೆ , ಸಂಜೆಯ ತಂಗಾಳಿಯಲ್ಲಿ ಏಕಾಂತದ ವಿಹಾರದಂತೆ , ಸೂರ್ಯನ ಚಿನ್ನಾಟವಿ...