Saturday, December 25, 2010

ಅರಮನೆ


~~~ ಅರಮನೆ~~~
ಅಲ್ಲಿರುವ ಬಣ್ಣಗಳೇ ಹಾಗೆ,
ನೋಡಿದರೆ, ಕೇಳಿದರೆ
ಹೇಳುತ್ತವೆ ನೂರಾರು
ಕತೆಗಳು!

ಗತಕಾಲದ ವೈಭವ
ಮೆರವಣಿಗೆಯ ಜಾತ್ರೆಯಲಿ,
ನೂರಾರು ಸಾಹಸಗಾತೆಯ
ಕಲ್ಲುಗಳು!

ಅಲ್ಲಿದೆ ದಬ್ಬಾಳಿಕೆ, ನಿಯಮ
ಕಟ್ಟುಪಾಡುಗಳ ಸರಪಳಿ,
ಕಾಡುವ ಬೇಹುಗಾರಿಕೆಯ
ಕುತಂತ್ರಗಳು!

ನಿತ್ಯ ಬರುವ ಕಣ್ಣುಗಳಿಗೆ
ಕಿಂಚಿತ್ತು ಮುಚ್ಚಿಟ್ಟು
ಬೇಡದುದುರ ಬಚ್ಚಿಟ್ಟು, ಆಡು
ಕಾಣದ ಕೈಗಳು!

Wednesday, December 22, 2010

ಕಳೆದ ವಿಳಾಸ

ನೆರಳಿಲ್ಲದ ಊರಿನಲ್ಲಿ
ವಿಳಾಸ ಹುಡುಕುವ ತವಕ,
ಬಾಯಾರಿ ಬಸವಳಿದ ಮನಸಿನ ತುಂಬಾ
ಕಾಣದ ಓರತೆಯ ಪುಳಕ!

ಊರೆಲ್ಲ ಹುಡುಕಿದರೂ
ವಿಳಾಸ ಸಿಗುತ್ತಿಲ್ಲ,
ರಚ್ಚೆ ಹಿಡಿದ ಮಗುವಿನಂತೆ
ಮನಸ್ಸು ಬಿಡುತ್ತಿಲ್ಲ!

ಅಗೋ! ಅಲ್ಲಿರಬಹುದೆಂದು ಊಹೆ,
ಓಡುತಿದೆ ಮನಸ್ಸಿನ ಕುದುರೆ
ಇರುವ ಭಂದನಗಳ ಬಿಡಿಸಿ,
ಕಾಣದ ಮನ್ವಂತರಕಡೆಗೆ!

ಕೆಲವೊಮ್ಮೆ ಊಹೆಯು ಸುಳ್ಳಾಗಬಹುದು!
ಊಹೆಗೂ ನಿಲುಕದ ವಿಷಯಗಳಿರಬಹುದು!
ಮನಸ್ಸು ಹಿಡಿದ ವಿಳಾಸವೇ ತಪ್ಪಿರಬಹುದು !
ಭಾವಕೆ ನಿಲುಕದ ಕನಸಿರಬಹುದು..?

ಕನಸು ಮನಸ್ಸುಗಳ ನಡುವೆ
ನಾನು ಹುಡುಕುತ್ತಿರುವ ವಿಳಾಸವೇ,
ಕಳೆದಿರಬಹುದು....!

Sunday, December 19, 2010

ನನ್ನ ಮಾತು

ವಿವಿಧ ಮುಖ
ಕತ್ತಲ ಕೋಣೆಯಲ್ಲಿ ಮನಸ ಕನ್ನಡಿಯಿಟ್ಟು ನನ್ನ ನಾನು ನೋಡಿದರೆ,
ವಿವಿಧ ಮುಖಗಳು, ಗುರುತು ಸಿಗದ,ಭಾವ ತಿಳಿಯದ!
ಕಂಡರೂ ಕಾಣದ ಸ್ನೇಹಿತರೆ ನನ್ನ ಮನದ ಅರಮನೆಯ ಖಾಲಿ ಮಾಡುವಿರಾ?
ಹೊದಿಕೆಯೊದ್ದು ಮಲಗಿರುವ ಕನಸ ಕನಸನ್ನು ನನಸಾಗಿಸುವಿರಾ

ಕನಸಿನ ಹನಿ

ಮೋಡದ ಮನೆಯ ಆಸೆಯ ಕನಸು ಹನಿಗಳಾಗಿ ಮೂಡಿವೆ,
ಆಸೆ
ಕಡಲು ಉಕ್ಕಿ ಹರಿದು ಮಳೆಯಾಗಿ ಸುರಿದಿವೆ।

ಜೀವದ ಭಾವವು ಚಿಗುರೊಡೆದು ಮನವು ಹಸಿರಾಗಿದೆ,
ಜಿಗಿದು ಬಂದ ಹನಿಗಳೂಡನೆ ಕನಸು ಕುಣಿದಾಡಿದೆ॥

ಮೊದಲ ಮಳೆ
ತವರಿನ ಕರೆಗೆ ಓಗೂಟ್ಟು ಬರುತ್ತಿರುವ ಓ ಮಳೆಯೇ,
ನಿನಗಿದೊ
ಸ್ವಾಗತ, ನಿನಗಿಲ್ಲಿ ಕಾದಿವೆ
ಮರಗಿಡಗಳ ಹಸಿರು,
ಹಕ್ಕಿಗಳ
ಉಸಿರು,
ಬಾ ತಣಿಸು ಮನವ,ತವರಿಗೆ ಸುಖವ॥

"ಬಿಗ್ ಟೆಂಪಲ್ "

"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...