ಕತ್ತಲ ಕೋಣೆಯಲ್ಲಿ ಮನಸ ಕನ್ನಡಿಯಿಟ್ಟು ನನ್ನ ನಾನು ನೋಡಿದರೆ,
ವಿವಿಧ ಮುಖಗಳು, ಗುರುತು ಸಿಗದ,ಭಾವ ತಿಳಿಯದ!
ಕಂಡರೂ ಕಾಣದ ಸ್ನೇಹಿತರೆ ನನ್ನ ಮನದ ಅರಮನೆಯ ಖಾಲಿ ಮಾಡುವಿರಾ?
ಹೊದಿಕೆಯೊದ್ದು ಮಲಗಿರುವ ಕನಸ ಕನಸನ್ನು ನನಸಾಗಿಸುವಿರಾ॥
ಕನಸಿನ ಹನಿ
ಮೋಡದ ಮನೆಯ ಆಸೆಯ ಕನಸು ಹನಿಗಳಾಗಿ ಮೂಡಿವೆ,
ಆಸೆ ಕಡಲು ಉಕ್ಕಿ ಹರಿದು ಮಳೆಯಾಗಿ ಸುರಿದಿವೆ।
ಜೀವದ ಭಾವವು ಚಿಗುರೊಡೆದು ಮನವು ಹಸಿರಾಗಿದೆ,
ಜಿಗಿದು ಬಂದ ಹನಿಗಳೂಡನೆ ಕನಸು ಕುಣಿದಾಡಿದೆ॥
ಮೊದಲ ಮಳೆ

ತವರಿನ ಕರೆಗೆ ಓಗೂಟ್ಟು ಬರುತ್ತಿರುವ ಓ ಮಳೆಯೇ,
ನಿನಗಿದೊ ಸ್ವಾಗತ, ನಿನಗಿಲ್ಲಿ ಕಾದಿವೆ ಮರಗಿಡಗಳ ಹಸಿರು,
ಹಕ್ಕಿಗಳ ಉಸಿರು, ಬಾ ತಣಿಸು ಮನವ,ತವರಿಗೆ ಸುಖವ॥
No comments:
Post a Comment