Friday, January 12, 2018

"ಬಿಗ್ ಟೆಂಪಲ್ "


"ಬಿಗ್ ಟೆಂಪಲ್ "


ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯನ್ನು ಮೈವೆತ್ತಿ ನಿಲ್ಲಿಸಿದ್ದಾರೆ, ದೈವ ಭಕ್ತಿಯ ತುತ್ತತುದಿಯಲ್ಲಿ ಮನುಶ್ಯರ ಶಕ್ತಿಯ ಪ್ರದರ್ಶನವಿದ್ದಂತೆ!! ಕಲ್ಪನೆಗೆ ಕಲ್ಲು ಕರಗಿದೆ., ಭಕ್ತಿಯ ದಿವ್ಯ ಭಾವಕ್ಕೆ ಇಲ್ಲಿ ಜೀವ ಬಂದಿದೆ. ನೀಲಿ ಆಕಾಶದ ಹಿನ್ನಲೆಯಲ್ಲಿ ಇದರ ಭವ್ಯತೆಯನ್ನು ಕಣ್ಣು ತುಂಬಿಕೊಳ್ಳೋದೇ ನಮ್ಮ ಅದೃಷ್ಟವೆನಿಸಬಹುದು.




ತಂಜಾವೂರ್, ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಇರುವ ಈ ಸ್ತಳ ಚೋಳ ಸಾಮ್ರಾಜ್ಯದ ಕಲೆ, ಸಂಸ್ಕೃತಿಯ ಪ್ರತೀಕ. ಇಲ್ಲಿರುವ ಬೃಹದೇಶ್ವರ ದೇವಸ್ಥಾನವನ್ನು ತಮಿಳಿನಲ್ಲಿ "ಪೆರಿಯ ಕೋವಿಲ್ " ಇಂಗ್ಲಿಷ್ನಲ್ಲಿ "ಬಿಗ್ ಟೆಂಪಲ್ " ಎಂದು ಕರೆಯ್ತತ್ತಾರೆ, ಹೆಸರಿಗೆ ಇಂಚಿನಷ್ಟು ಚ್ಯುತಿ ಬರದಂತೆ ಈ ದೇವಸ್ಥಾನ ನೋಡುಗರನ್ನು ಸ್ವಾಗತಿಸುತ್ತದೆ. ಸುಮಾರು ೧೦೦೦ ವರ್ಷಗಳ ಹಿಂದೆ ೧ನೇ ರಾಜ ರಾಜ ಚೋಳನ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಈ ದೇವಸ್ಥಾನ ನಂತರ ನಾಯಕರು, ಮರಾಠರ ಕೈಯಲ್ಲಿ ಉದ್ಧಾರಗೊಳ್ಳುತ್ತದೆ. ದೇವಸ್ಥಾನದ ವಿಮಾನದಲ್ಲಿ  ಇರುವ ಸುಮಾರು ೮೦ ಟನ್ ತೂಕದ ಕಲ್ಲಿನ ಗೋಪುರ, ಅಷ್ಟು ಭಾರದ ಕಲ್ಲನ್ನು ೭೦ ಮೀಟರ್ ಎತ್ತರದಲ್ಲಿ ಇಡಲು ಉಪಯೋಗಿಸಿರುವ ತಂತ್ರಜ್ಞಾನ ಮೂಕ ವಿಸ್ಮಿತರನ್ನಾಗಿಸುತ್ತವೆ. 


ಮನುಕುಲದ ಅದ್ಬುತ ಸೃಷ್ಟಿಯನ್ನು ಕಣ್ಣ್ತುಂಬಿಕೊಂಡಿದ್ದೆ ನಮ್ಮೆಲರ ಅದೃಷ್ಟ .!!

ಅಪರೂಪಕ್ಕೆ ಒಂದು ಕವಿತೆ / ಕತೆ 

ಮುಗಿಯುತ್ತಿದೆ ಮತ್ತೊಂದು ಮಳೆಗಾಲ,
ಹಿದೆಂದೋ ಕನಸು ಕಂಡಂತೆ, ಆ ರಸ್ತೆಯಲ್ಲಿ 
ಜಿನುಗುಡುವ ಮಳೆಗೆ ಕೊಡೆಯಿಡಿದು ನೆಡೆಯಬೇಕಿತ್ತು ನಾವು!
ಕಾರ್ಮೋಡದ ಜೊತೆ ಗುದ್ದಾಡಿ ಹೊರಬರಲು 
ತವಕಿಸುವ ಸೂರ್ಯನ ಪಡಿಪಾಟಲು ಕಣ್ತುಂಬಿಕೊಳ್ಳಬೇಕಿತ್ತು!
ಅಚಾನಕ್ಕಾಗಿ ನೆನಪಿಗೆ ಬಂದ ಹಾಡೊಂದನ್ನು ಗುನುಗಬೇಕಿತ್ತು !
ಅದು ಯಾವುದೊ ಸಿನಿಮಾದಲ್ಲಿ ತೋರಿಸಿದಂತೆ 
ಮಳೆಹನಿಗಳ ಬೊಗಸೆಯಲ್ಲಿ ಹಿಡಿಯಬೇಕಿತ್ತು! ಜೊತೆಗೆ 
ನೀ ಅಂದುಕೊಂಡಂತೆ ಮಳೆಯಲ್ಲಿ ಬೋರ್ಗೆರೆಯುವ 
ಸಮುದ್ರವ, ಸಾಲಿನ ಕೊನೆ ಬೆಂಚಿನಲ್ಲಿ ಕೂತು ನೋಡಬೇಕಿತ್ತು!!

ಪ್ರತಿ ಸಲದಂತೆ, ಈ ಸಲವೂ ಎಲ್ಲಾ ನಕ್ಷತ್ರಗಳ 
ಮಳೆಗಳು ಬಂದು ಹೋದವು! ಅಲ್ಲಿರುವ ಸಮುದ್ರ ,
ರಸ್ತೆ, ಮನೆ ಮೂಲೆಯಲ್ಲಿರುವ ಕೊಡೆ, ಎಲ್ಲಾ ಕಾಯುತ್ತಿದ್ದವು!!

ಬಸ್ !! ತುಮ್  ನಹಿ ತಾ!! ಪ್ರತಿ ವರ್ಷದಂತೆ ಮತ್ತೆ 
ಹಳೆ ಕನಸುಗಳಿಗೆ ಚಂದಾ ಕಟ್ಟಿ ಚಂದಾದಾರನಾಗುತ್ತೇನೆ !!
ಮುಂದಿನ ವರ್ಷ ಮತ್ತೊಂದು ಮುಂಗಾರು ಬರುತ್ತದೆ!
ನೀನು ಬರುತ್ತೀಯಾ! ಹಳೆ ಕನಸುಗಳು ಬರುತ್ತವೆ !!

ಆದರೆ, ನನಗೊಂದೇ ಚಿಂತೆ !! ನಾನು ಅಂದುಕೊಂಡಂತೆ,
ಆ ಸೂರ್ಯಾಸ್ತ, ಆ ರಸ್ತೆ, ಆ ಸುಮುದ್ರ ತೀರ, ಸಾಲಿನ 
ಕೊನೆಯ ಬೆಂಚು, ನಾನು , ನೀನು ಎಲ್ಲಾವೂ !!  ಅಂದು 
ಕಂಡಂತೆ ಇರಬಹುದಾ ? ಕ್ಷಣಕೊಮ್ಮೆ ಬದಲಾಗುವ ಅಲೆಗಳಂತೆ 
ಎಲ್ಲ ತಮ್ಮ ತಮ್ಮಲ್ಲೇ ಕಳೆದು ಹೋಗಿರಬಹುದಾ??

"ಬಿಗ್ ಟೆಂಪಲ್ "

"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...