Friday, January 12, 2018

ಅಪರೂಪಕ್ಕೆ ಒಂದು ಕವಿತೆ / ಕತೆ 

ಮುಗಿಯುತ್ತಿದೆ ಮತ್ತೊಂದು ಮಳೆಗಾಲ,
ಹಿದೆಂದೋ ಕನಸು ಕಂಡಂತೆ, ಆ ರಸ್ತೆಯಲ್ಲಿ 
ಜಿನುಗುಡುವ ಮಳೆಗೆ ಕೊಡೆಯಿಡಿದು ನೆಡೆಯಬೇಕಿತ್ತು ನಾವು!
ಕಾರ್ಮೋಡದ ಜೊತೆ ಗುದ್ದಾಡಿ ಹೊರಬರಲು 
ತವಕಿಸುವ ಸೂರ್ಯನ ಪಡಿಪಾಟಲು ಕಣ್ತುಂಬಿಕೊಳ್ಳಬೇಕಿತ್ತು!
ಅಚಾನಕ್ಕಾಗಿ ನೆನಪಿಗೆ ಬಂದ ಹಾಡೊಂದನ್ನು ಗುನುಗಬೇಕಿತ್ತು !
ಅದು ಯಾವುದೊ ಸಿನಿಮಾದಲ್ಲಿ ತೋರಿಸಿದಂತೆ 
ಮಳೆಹನಿಗಳ ಬೊಗಸೆಯಲ್ಲಿ ಹಿಡಿಯಬೇಕಿತ್ತು! ಜೊತೆಗೆ 
ನೀ ಅಂದುಕೊಂಡಂತೆ ಮಳೆಯಲ್ಲಿ ಬೋರ್ಗೆರೆಯುವ 
ಸಮುದ್ರವ, ಸಾಲಿನ ಕೊನೆ ಬೆಂಚಿನಲ್ಲಿ ಕೂತು ನೋಡಬೇಕಿತ್ತು!!

ಪ್ರತಿ ಸಲದಂತೆ, ಈ ಸಲವೂ ಎಲ್ಲಾ ನಕ್ಷತ್ರಗಳ 
ಮಳೆಗಳು ಬಂದು ಹೋದವು! ಅಲ್ಲಿರುವ ಸಮುದ್ರ ,
ರಸ್ತೆ, ಮನೆ ಮೂಲೆಯಲ್ಲಿರುವ ಕೊಡೆ, ಎಲ್ಲಾ ಕಾಯುತ್ತಿದ್ದವು!!

ಬಸ್ !! ತುಮ್  ನಹಿ ತಾ!! ಪ್ರತಿ ವರ್ಷದಂತೆ ಮತ್ತೆ 
ಹಳೆ ಕನಸುಗಳಿಗೆ ಚಂದಾ ಕಟ್ಟಿ ಚಂದಾದಾರನಾಗುತ್ತೇನೆ !!
ಮುಂದಿನ ವರ್ಷ ಮತ್ತೊಂದು ಮುಂಗಾರು ಬರುತ್ತದೆ!
ನೀನು ಬರುತ್ತೀಯಾ! ಹಳೆ ಕನಸುಗಳು ಬರುತ್ತವೆ !!

ಆದರೆ, ನನಗೊಂದೇ ಚಿಂತೆ !! ನಾನು ಅಂದುಕೊಂಡಂತೆ,
ಆ ಸೂರ್ಯಾಸ್ತ, ಆ ರಸ್ತೆ, ಆ ಸುಮುದ್ರ ತೀರ, ಸಾಲಿನ 
ಕೊನೆಯ ಬೆಂಚು, ನಾನು , ನೀನು ಎಲ್ಲಾವೂ !!  ಅಂದು 
ಕಂಡಂತೆ ಇರಬಹುದಾ ? ಕ್ಷಣಕೊಮ್ಮೆ ಬದಲಾಗುವ ಅಲೆಗಳಂತೆ 
ಎಲ್ಲ ತಮ್ಮ ತಮ್ಮಲ್ಲೇ ಕಳೆದು ಹೋಗಿರಬಹುದಾ??

No comments:

Post a Comment

"ಬಿಗ್ ಟೆಂಪಲ್ "

"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...