Wednesday, June 27, 2012



ನನಗೊಂದೆ ಪ್ರಶ್ನೆ

ನಾ ಬರೆಯುವ ಕವಿತೆಗಳ ತುಂಬಾ 
ಹಾಳು ಉಪಮೆಗಳ ಕಾಟ! 
ಇವು ಆಡುತಿವೆ ಬಿಡದೆ ಹಿಂಬಾಲಿಸಿ 
ಕವಿತೆಯೊಳಗೆ ನುಸುಳುವ ಆಟ!!

ಕೂತು ಹೇಳುತಿವೆ, ನಾವಿಲ್ಲದೆ 
ನಿನ್ನ ಕವಿತೆಗಳಿಗೆ ಜೀವವಿಲ್ಲ, ಭಾವವಿಲ್ಲ 
ಅರ್ಥವಂತು ಮೊದಲೇ ಇಲ್ಲ...!!

ನಾನು ಬಿಟ್ಟ ಕಣ್ಣು ಬಿಟ್ಟಂತೆ,
ಕೇಳಬೇಕಿದೆ ಇವುಗಳ ಮಾತು, 
ಯಾಕೆಂದರೆ ಇವುಗಳಿಲ್ಲದೆ 
ನನ್ನ ಕವಿತೆಗಳಿಗೆ ಓದಿಸಿಕೊಳ್ಳುವ
ಗತ್ತು ಇಲ್ಲ, ತಾಕತ್ತು ಇಲ್ಲ!!

ನನ್ನಂತ ಬಡಪಾಯಿ, ಆಮಾಯಕನ 
ಮೇಲೆ ಇವುಗಳ ದೌರ್ಜನ್ಯ ಸಲ್ಲ!
ನಾನಂತೂ..! ಇದ ಸಹಿಸುವುದು ಇಲ್ಲ!!

ಈಗ ನನಗೊಂದೆ ಪ್ರಶ್ನೆ..
ಬರೆಯಬಹುದಾ ಕವಿತೆಗಳಾ
ಈ ಉಪಮೆಗಳಿಲ್ಲದೆ...?

No comments:

Post a Comment

"ಬಿಗ್ ಟೆಂಪಲ್ "

"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...