ಬಹುದಿನಗಳಿಂದ ಹುಡುಕಿದ
ನೆನಪು ಸಿಕ್ಕ ಸಂತೋಷ,
ಸಿಕ್ಕ ನೆನಪಿಗೆ, ಚಿಕ್ಕ ಅಲಿಂಗನ
ಉಭಯ ಕುಶಲೋಪರಿ ಸಂಪ್ರತ !
ಬಿಸಿಲ ಮಧ್ಯಾನ, ಜನಗಳ ಜಾತ್ರೆಯಲ್ಲಿ
ನೆನಪಿನೊಂದಿಗೆ ನೆನಪುಗಳನ್ನು ಹುಡುಕುತ್ತ
ಕಾಲೆಳೆಯುತ್ತಾ, ಸುಖ ಸುಮ್ಮನೆ ಹರಟುತ್ತ,
ಬೇಡವಾದರೂ ನೆನಪಿಗೆ ತೆರಿಗೆ ಪಾವತಿಸುತ್ತ!
ಹೊರೆಟೆನು ನೆನಪಿನ ಜೊತೆಗೆ, ಬಹುದೂರ
ದಾರಿಯಲ್ಲಿ ಸಿಕ್ಕ ಪುಸ್ತಕದ ಸಂತೆಯಲ್ಲಿ
ಒಂದು ಪರಿವೀಕ್ಷಣೆ, ಒಂದೋ ಖರೀದಿ
ಆದರೂ ನೆನಪಿಗೇಕೆ ಕಾಂಚಾಣದ ಕರ!
ಆಗೂ ! ಮತ್ತೊಂದು ನೆನಪು ಜೊತೆಯಾಯ್ತು,
ಒಟ್ಟಿನಲ್ಲಿ ನೆನಪುಗಳೊಂದಿಗೆ ನೆನಪಿನ ದಿಗಂತದಲ್ಲಿ
ಮರೆಯಾಗಿ, ಮರಳಿ ಹುಡುಕಿ ಬಂದ
ವಿಳಾಸದ ಜೊತೆಯಾಗಿ ! ಅರ್ಥವಿಲ್ಲದ ಪಯಣ.
ಅನುಕ್ಷಣದ ಗೊಂದಲ, ವಿಧವಿಧವಾದ ಆಯ್ಕೆಗಳು,
ಆಯ್ಕೆಗೂ ಬೇಕು ದುಡ್ಡಿನ ಬಲ,
ಮೂರು ಕ್ಷಣದ ಖುಷಿಗೆ, ಅದು ನೆನಪಿನ ಜೊತೆಯಲ್ಲಿ,
ಕ್ಷಮಿಸಿ..! ನೆನಪುಗಳ ಜೊತೆಯಲ್ಲಿ.
ಮುಗಿದ ಅಧ್ಯಾಯದ ಕೊನೆಯ ಪುಟದಂತೆ,
ಎಲ್ಲ ಪುಟಗಳ ಬಂಧವನ್ನು ಬಿಡಿಸಿದಂತೆ,
ಅರ್ಥವಾಗದ ವಿಷಯಗಳ ಮರೆತಂತೆ!
ಕ್ಷಣ ಹೊತ್ತು ಜೊತೆಯಾದ ನೆನಪುಗಳ,
ಬಿಳ್ಕೊಡುಗೆಯಂತೆ...!
Subscribe to:
Post Comments (Atom)
"ಬಿಗ್ ಟೆಂಪಲ್ "
"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...

-
ಅಪರೂಪಕ್ಕೆ ಒಂದು ಕವಿತೆ / ಕತೆ ಮುಗಿಯುತ್ತಿದೆ ಮತ್ತೊಂದು ಮಳೆಗಾಲ, ಹಿದೆಂದೋ ಕನಸು ಕಂಡಂತೆ, ಆ ರಸ್ತೆಯಲ್ಲಿ ಜಿನುಗುಡುವ ಮಳೆಗೆ ಕೊಡೆಯಿಡಿದು ನೆಡೆಯಬೇಕಿ...
-
ಅಗೋ ನೋಡಿ ಓಡುತ್ತಿದೆ ಹುಚ್ಚು ಕುದುರೆ ಬೆನ್ನ ಹೇರಿ ಕಂಡದೆಲ್ಲ ನುಂಗಿ ಹಾಕಿ ಮುನುಕುಲಕೆ ಬಲೆಯ ಬೀಸಿ ಅಗೋ ನೋಡಿ........! ಅಗೋ ನೋಡಿ ಓಡುತ್ತಿದೆ ಬದುಕುಗಳನ್ನು ಅಸ್ತಗೊಳ...
-
"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...
ಹೇಯ್ ನಿಮ್ಮ ಪರಿಚಯವಾದದ್ದು ಖುಷಿಯ ವಿಷಯ. ನಿಮ್ಮ ಕೆಲ ಕವಿತೆಗಳು ಇಷ್ಟವಾಯಿತು,ಅದರಲ್ಲೂ ಪದಕಟ್ಟುವ ರೀತಿ.ಹೀಗೇ ಬರೆಯುತ್ತಿರಿ. ನಿಮ್ಮೊಳಗಿನ ತುಡಿತ,ದೃಷ್ಟಿ ಹಾಗೂ ಹುಡುಕಾಟ ಹೀಗೇ ಮುಂದುವರಿಯಲಿ
ReplyDeletesuperb phani... xlent...
ReplyDelete