ಬಾಲ್ಯವೆಂದರೆ ಹಾಗೆ! ಸುರಿವ ಮಳೆಗೆ ಮೈಯೊಡ್ಡಿ ನಿಂತಿರುವ ಕನಸುಗಳನ್ನು ಬಾಚಿ ತಬ್ಬಿದಂತೆ, ಸಂಜೆಯ ತಂಗಾಳಿಯಲ್ಲಿಏಕಾಂತದ ವಿಹಾರದಂತೆ, ಸೂರ್ಯನ ಚಿನ್ನಾಟವಿರುವ ಓಂದು ಬೆಚ್ಚಗಿನ ಮುಂಜಾವಿನಂತೆ....!
ಅಲ್ಲಿರುವ ಗೆಳೆತನ, ಓದು, ಆಟ, ಹಠ, ಮುಗ್ದತೆ, ಕುತೂಹಲ, ಭಯ ಎಲ್ಲವು ಮೈದುಂಬಿದ ಸುಗ್ಗಿಯ ಬೆಳೆಯಂತೆ...!

ಈಗಿನ ಸುಂದರ ಮುಖವಾಡದ, ಕೃತಕ ನಗುವಿನ ಕನಸುಗಳ ಹಿಂದೆ ಓಡುವ ನಮ್ಮ ಹುಂಬತನವ ನೋಡಿ ನಗುತ್ತಿರುವ ಬಾಲ್ಯದಮುಗ್ದತೆ ಮತ್ತೆ ತಿರುಗಿ ಬರಬಾರದೆ...?