Wednesday, December 22, 2010

ಕಳೆದ ವಿಳಾಸ

ನೆರಳಿಲ್ಲದ ಊರಿನಲ್ಲಿ
ವಿಳಾಸ ಹುಡುಕುವ ತವಕ,
ಬಾಯಾರಿ ಬಸವಳಿದ ಮನಸಿನ ತುಂಬಾ
ಕಾಣದ ಓರತೆಯ ಪುಳಕ!

ಊರೆಲ್ಲ ಹುಡುಕಿದರೂ
ವಿಳಾಸ ಸಿಗುತ್ತಿಲ್ಲ,
ರಚ್ಚೆ ಹಿಡಿದ ಮಗುವಿನಂತೆ
ಮನಸ್ಸು ಬಿಡುತ್ತಿಲ್ಲ!

ಅಗೋ! ಅಲ್ಲಿರಬಹುದೆಂದು ಊಹೆ,
ಓಡುತಿದೆ ಮನಸ್ಸಿನ ಕುದುರೆ
ಇರುವ ಭಂದನಗಳ ಬಿಡಿಸಿ,
ಕಾಣದ ಮನ್ವಂತರಕಡೆಗೆ!

ಕೆಲವೊಮ್ಮೆ ಊಹೆಯು ಸುಳ್ಳಾಗಬಹುದು!
ಊಹೆಗೂ ನಿಲುಕದ ವಿಷಯಗಳಿರಬಹುದು!
ಮನಸ್ಸು ಹಿಡಿದ ವಿಳಾಸವೇ ತಪ್ಪಿರಬಹುದು !
ಭಾವಕೆ ನಿಲುಕದ ಕನಸಿರಬಹುದು..?

ಕನಸು ಮನಸ್ಸುಗಳ ನಡುವೆ
ನಾನು ಹುಡುಕುತ್ತಿರುವ ವಿಳಾಸವೇ,
ಕಳೆದಿರಬಹುದು....!

No comments:

Post a Comment

"ಬಿಗ್ ಟೆಂಪಲ್ "

"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...