Thursday, January 20, 2011

ಮತ್ತೆ ಬರಬಾರದೆ...?



















ಬಾಲ್ಯವೆಂದರೆ ಹಾಗೆ! ಸುರಿವ ಮಳೆಗೆ ಮೈಯೊಡ್ಡಿ ನಿಂತಿರುವ ಕನಸುಗಳನ್ನು ಬಾಚಿ ತಬ್ಬಿದಂತೆ, ಸಂಜೆಯ ತಂಗಾಳಿಯಲ್ಲಿಏಕಾಂತದ ವಿಹಾರದಂತೆ, ಸೂರ್ಯನ ಚಿನ್ನಾಟವಿರುವ ಓಂದು ಬೆಚ್ಚಗಿನ ಮುಂಜಾವಿನಂತೆ....!
ಅಲ್ಲಿರುವ ಗೆಳೆತನ, ಓದು, ಆಟ, ಹಠ, ಮುಗ್ದತೆ, ಕುತೂಹಲ, ಭಯ ಎಲ್ಲವು ಮೈದುಂಬಿದ ಸುಗ್ಗಿಯ ಬೆಳೆಯಂತೆ...!


























ಈಗಿನ
ಸುಂದರ ಮುಖವಾಡದ, ಕೃತಕ ನಗುವಿನ ಕನಸುಗಳ ಹಿಂದೆ ಓಡುವ ನಮ್ಮ ಹುಂಬತನವ ನೋಡಿ ನಗುತ್ತಿರುವ ಬಾಲ್ಯದಮುಗ್ದತೆ ಮತ್ತೆ ತಿರುಗಿ ಬರಬಾರದೆ...?

Tuesday, January 18, 2011

ನೆನಪುಗಳು..!

ಬಹುದಿನಗಳಿಂದ ಹುಡುಕಿದ
ನೆನಪು ಸಿಕ್ಕ ಸಂತೋಷ,
ಸಿಕ್ಕ ನೆನಪಿಗೆ, ಚಿಕ್ಕ ಅಲಿಂಗನ
ಉಭಯ ಕುಶಲೋಪರಿ ಸಂಪ್ರತ !

ಬಿಸಿಲ ಮಧ್ಯಾನ, ಜನಗಳ ಜಾತ್ರೆಯಲ್ಲಿ
ನೆನಪಿನೊಂದಿಗೆ
ನೆನಪುಗಳನ್ನು ಹುಡುಕುತ್ತ
ಕಾಲೆಳೆಯುತ್ತಾ, ಸುಖ ಸುಮ್ಮನೆ ಹರಟುತ್ತ,
ಬೇಡವಾದರೂ ನೆನಪಿಗೆ ತೆರಿಗೆ ಪಾವತಿಸುತ್ತ!

ಹೊರೆಟೆನು ನೆನಪಿನ ಜೊತೆಗೆ, ಬಹುದೂರ
ದಾರಿಯಲ್ಲಿ ಸಿಕ್ಕ ಪುಸ್ತಕದ ಸಂತೆಯಲ್ಲಿ
ಒಂದು
ಪರಿವೀಕ್ಷಣೆ, ಒಂದೋ ಖರೀದಿ
ಆದರೂ ನೆನಪಿಗೇಕೆ ಕಾಂಚಾಣದ ಕರ!

ಆಗೂ ! ಮತ್ತೊಂದು ನೆನಪು ಜೊತೆಯಾಯ್ತು,
ಒಟ್ಟಿನಲ್ಲಿ ನೆನಪುಗಳೊಂದಿಗೆ ನೆನಪಿನ ದಿಗಂತದಲ್ಲಿ
ಮರೆಯಾಗಿ, ಮರಳಿ ಹುಡುಕಿ ಬಂದ
ವಿಳಾಸದ ಜೊತೆಯಾಗಿ ! ಅರ್ಥವಿಲ್ಲದ ಪಯಣ.

ಅನುಕ್ಷಣದ ಗೊಂದಲ, ವಿಧವಿಧವಾದ ಆಯ್ಕೆಗಳು,
ಆಯ್ಕೆಗೂ ಬೇಕು ದುಡ್ಡಿನ ಬಲ,
ಮೂರು ಕ್ಷಣದ ಖುಷಿಗೆ, ಅದು ನೆನಪಿನ ಜೊತೆಯಲ್ಲಿ,
ಕ್ಷಮಿಸಿ..! ನೆನಪುಗಳ ಜೊತೆಯಲ್ಲಿ.

ಮುಗಿದ ಅಧ್ಯಾಯದ ಕೊನೆಯ ಪುಟದಂತೆ,
ಎಲ್ಲ ಪುಟಗಳ ಬಂಧವನ್ನು ಬಿಡಿಸಿದಂತೆ,
ಅರ್ಥವಾಗದ ವಿಷಯಗಳ ಮರೆತಂತೆ!
ಕ್ಷಣ ಹೊತ್ತು ಜೊತೆಯಾದ ನೆನಪುಗಳ,
ಬಿಳ್ಕೊಡುಗೆಯಂತೆ...!

"ಬಿಗ್ ಟೆಂಪಲ್ "

"ಬಿಗ್ ಟೆಂಪಲ್ " ಆಗಾಧತೆ!! ಕಲ್ಪನೆಯನ್ನು ವಿಸ್ತರಿಸಿದೆಂತೆಲ್ಲ ಮಿತಿಯಿಲ್ಲದ ಕೃತಿಗಳು ತಯಾರಾಗುತ್ತವೆ. ಇಗೋ ಇಲ್ಲಿ ೧೦೦೦ ವರ್ಷಗಳ ಹಿಂದೆಯೇ ಬೃಹತತೆಯ...