ಎಲೆ
ಉದುರಿ ಬಿದ್ದ ಆ ಎಲೆಗೆ
ಮೇಲೇರುವ ಆಸೆ ಇರಲಿಲ್ಲ ,
ಬಿದ್ದ ಎಲೆಯ ಸಪ್ಪಳ ಕೇಳುವ
ಗೋಜು ಯಾರಿಗೂ ಇಲ್ಲ !
ಬಿಸಿಲಿಗೆ ಒಣಗಿ ಬಾಡಿ
ಬಿದ್ದ ಎಲೆ ಆದಾಗಿರಲಿಲ್ಲ,
ಯಾರೋ ಬಲವಂತದಿಂದ
ಕಿತ್ತು ಬಿಸಾಡಿರಬೇಕು !!
ತಾನು ಮಾಡಿರುವ
ತಪ್ಪಾದರೂ ಏನು..?
ಎಂದು ಕಾರಣ ಹುಡುಕುವ
ಆಟ ತಿಳಿಯದ ಎಲೆ ಅದು !
ಆದರೆ ಕೀಳುವ ಮನಸಿಗೆ
ಕಾರಣ ಬೇಕಾಗಿರಲಿಲ್ಲ
ತನ್ನ ಖುಷಿಗೆ, ಬೇರೆಯವರ
ಮನನೋಯಿಸುವ ಮನಸ್ಸಿನಂತೆ !!
ಉದುರಿ ಬಿದ್ದ ಆ ಎಲೆಗೆ
ಮೇಲೇರುವ ಆಸೆ ಇರಲಿಲ್ಲ ,
ಬಿದ್ದ ಎಲೆಯ ಸಪ್ಪಳ ಕೇಳುವ
ಗೋಜು ಯಾರಿಗೂ ಇಲ್ಲ !
ಬಿಸಿಲಿಗೆ ಒಣಗಿ ಬಾಡಿ
ಬಿದ್ದ ಎಲೆ ಆದಾಗಿರಲಿಲ್ಲ,
ಯಾರೋ ಬಲವಂತದಿಂದ
ಕಿತ್ತು ಬಿಸಾಡಿರಬೇಕು !!
ತಾನು ಮಾಡಿರುವ
ತಪ್ಪಾದರೂ ಏನು..?
ಎಂದು ಕಾರಣ ಹುಡುಕುವ
ಆಟ ತಿಳಿಯದ ಎಲೆ ಅದು !
ಆದರೆ ಕೀಳುವ ಮನಸಿಗೆ
ಕಾರಣ ಬೇಕಾಗಿರಲಿಲ್ಲ
ತನ್ನ ಖುಷಿಗೆ, ಬೇರೆಯವರ
ಮನನೋಯಿಸುವ ಮನಸ್ಸಿನಂತೆ !!